ಗಂಡನ ಎಡ ಭಾಗದಲ್ಲಿ ಏಕೆ ಹೆಂಡತಿ ಇರಬೇಕು?

ಗಂಡನ ಎಡ ಭಾಗದಲ್ಲಿ ಏಕೆ ಹೆಂಡತಿ ಇರಬೇಕು ಇಲ್ಲಿದೆ ಓದಿ. ಗೃಹಸ್ಥನು ಮಾಡುವ ಸಕಲ ಸತ್ಕಾರ್ಯಗಳಲ್ಲಿ ಹೆಂಡತಿ ಗಂಡನ ಎಡ ಭಾಗದಲ್ಲಿರ ಬೇಕು. ದೇವರಿಗೆ ಅಭಿಷೇಕ, ಪುರಾಣ ಶ್ರವಣ, ದಾನ- ಧರ್ಮಾದಿಗಳನ್ನು ಮಾಡುವಾಗ, ದಂಪತಿ ಸ್ನಾನ ಮಾಡುವಾಗ, ಶಯನ ಸಮಯದಲ್ಲಿ ಹೆಂಡತಿ ಗಂಡನ ಎಡ ಭಾಗದಲ್ಲಿ ಇರಬೇಕು.

ಗಂಡನ ಎಡ ಹೆಂಡತಿ ಇರಬೇಕು
ಅದೇ ಕನ್ಯಾದಾನ, ದೇವ ಪ್ರತಿಷ್ಠೆ, ಯಜ್ಞ ಕಾರ್ಯಗಳಲ್ಲಿ ತೊಡಗಿದಾಗ ಹೆಂಡತಿ ಗಂಡನ ಬಲ ಭಾಗದಲ್ಲಿರ ಬೇಕು. ಈಶ್ವರನು ತನ್ನ ಬಲ ಭಾಗದಿಂದ ಪುರುಷನನ್ನೂ, ಎಡ ಭಾಗದಿಂದ ಸ್ತ್ರೀಯನ್ನು ಸೃಷ್ಟಿಸಿದನು. ಪ್ರತಿ ವ್ಯಕ್ತಿಯ ದೇಹದ ಬಲ ಭಾಗದಲ್ಲಿ ಸೂರ್ಯ/ ಪಿಂಗಳ (ಗಂಡು) ನಾಡಿಯೂ, ಎಡ ಭಾಗದಲ್ಲಿ ಚಂದ್ರ/ ಇಡಾ (ಹೆಣ್ಣು), ಮಧ್ಯದಲ್ಲಿ ಆಜ್ಞಾ ಚಕ್ರದಿಂದ ಮೂಲಾಧಾರದವರೆಗೆ ಸುಶುಮ್ನಾ ನಾಡಿಗಳಿರುತ್ತದೆ. ಹಾಗಾಗಿ ನಾವೆಲ್ಲಾಅರ್ಧನಾರೀಶ್ವರರೇ. ಯಾರಿಗೆ ಯಾವ ನಾಡಿ ಹೆಚ್ಚು ಪ್ರಚೋದನೆ ಆಗಿರುವುದೋ ಅವರ ಗುಣಗಳು ಅದೇ ರೀತಿ ಇರುತ್ತದೆ. ಮನುಷ್ಯರಿಗೆ ಹೃದಯ ಎಡ ಭಾಗದಲ್ಲಿ ಇರುವುದರಿಂದ ಚಲನಶಕ್ತಿ ಅದೇ ಭಾಗದಿಂದ ಉತ್ಪನ್ನ ಆಗುವುದರಿಂದ ಎಡ ಭಾಗಕ್ಕೆ ಹಾಗೂ ಹೆಂಡತಿಗೆ ಜೀವನದಲ್ಲಿ ವಿಶೇಷ ಸ್ಥಾನವಿದೆ.

Leave a Reply