ದಾನಗಳು ಮತ್ತು ಮಹತ್ವ

ಒಂದು ವಸ್ತುವನ್ನು ಬೇರೆಯ ವ್ಯಕ್ತಿಗೆ, ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೇ ಕೊಡೋದು ದಾನ..
ಷೋಡಶ ದಾನಗಳು ತುಂಬಾ ವಿಶೇಷ..
೧. ಗೋವು ದಾನ
೨. ಭೂ ದಾನ
೩. ಹಿರಣ್ಯ ದಾನ
೪. ವಸ್ತ್ರ ದಾನ ಅಥವಾ ಆಭರಣ ದಾನ
೫. ಚಕ್ರದಾನ
೬. ಚಾಮರ ದಾನ
೭. ಶಯ್ಯಾದಾನ
೮. ವ್ಯಜನ ದಾನ
೯. ಸಾಲದಾನ
೧೦. ಗ್ರಾಮದಾನ
೧೧. ಧನದಾನ
೧೨. ಧಾನ್ಯದಾನ
೧೩. ದೀಪದಾನ
೧೪. ಪಾದುಕ ದಾನ
೧೫. ತುಪ್ಪದಾನ
೧೬. ಕನ್ಯಾದಾನ..
ಇವು ತುಂಬಾ ವಿಶೇಷ..
ದಾನಗಳಲ್ಲಿ ೩ ತರಹ ಇದೆ..
೧. ಮನೋದಾನ
೨. ರೂಡಿದಾನ
೩. ಸಂಕಲ್ಪ ದಾನ
ಮನೋದಾನ : ನಮ್ಮಲ್ಲಿರುವ ವಸ್ತುವನ್ನು ಬೇರೆಯವರು ನೋಡಿ ಇಷ್ಟಪಟ್ಟಾಗ ಅದನ್ನು ಕೂಡಲೇ ಕೊಟ್ಟು ಅವರ ಮನಸ್ಸನ್ನು ಸಂತೋಷಪಡಿಸುವುದು.. ಇದಕ್ಕೆ ಮನೋದಾನ ಎನ್ನುತ್ತಾರೆ..
ರೂಡಿದಾನ : ದೇವರ ಉತ್ಸವಗಳಲ್ಲಿ ಪ್ರತಿ ವರ್ಷ ಪಾನಕ ಕೋಸಂಬರಿ ಈ ತರಹ ದಾನ ಕೊಡೋದು..
ಸಂಕಲ್ಪ ದಾನ ಅಥವ ಗುಪ್ತದಾನ : ದಾನದ ವಸ್ತುವನ್ನು ತೆಗೆದುಕೊಳ್ಳುವವರಿಗೆ ಕಾಣದ ಹಾಗೆ ಕೊಡೋದು ಸಂಕಲ್ಪ ಅಥವಾ ಗುಪ್ತದಾನ..
ಉದಾ : ಹಬ್ಬಗಳಲ್ಲಿ ಆಭರಣ, ಬೆಳ್ಳಿ ಈ ತರಹದ ವಸ್ತುಗಳನ್ನು ಕಾಣದ ಹಾಗೆ ಕುಂಕುಮದಲ್ಲಿ ಮುಚ್ಚಿಟ್ಟು ಕೊಡುತ್ತಾರೆ ..
ಗುಪ್ತದಾನದಲ್ಲಿ ೨ ತರಹ ಇದೆ..
೧. ಗೋಚರ ದಾನ : ಜೀವಂತ ವ್ಯಕ್ತಿಗ ಜೀವಂತವ್ಯಕ್ತಿಗೆ ಕೊಡೋ ದಾನ..
೨. ಅಗೋಚರ ದಾನ : ಮರಣ ಹೊಂದಿದ ವ್ಯಕ್ತಿಯ ಹೆಸರು ಹೇಳಿ, ಆ ವ್ಯಕ್ತಿಯ ಸದ್ಗತಿಗಾಗಿ ಜೀವಂತ ವ್ಯಕ್ತಿಗೆ ದಾನ ಕೊಡೋದು..
ಇದಕ್ಕೆ ಅಪರ ದಾನ ಅಂತನೂ ಅಂತಾರೆ..
ಈ ದಾನವನ್ನು ಸ್ವೀಕರಿಸುವ ವ್ಯಕ್ತಿ ಪ್ರಾಯ಼ಶ್ಚಿತ್ತಾದಿಗಳನ್ನು ಮಾಡಿಕೊಳ್ಳಲೇಬೇಕು..
ಇಲ್ಲದಿದ್ದರೆ ತುಂಬಾ ದೋಷಗಳು ಬರುತ್ತದೆ…
ದಾನ ತೆಗೆದುಕೊಳ್ಳುವವರು ಒಂದನೇ ದಾನ ಆದರೆ ೧೦೦೦ ಗಾಯತ್ರಿ ಜಪ ಮಾಡಬೇಕು..
ಒಂದನೆ ದಾನ ಗೋದಾನ..
ಎರಡನೇ ದಾನ ಭೂದಾನ ಆದರೆ ೨೦೦೦ ಗಾಯತ್ರಿ ಜಪ ಮಾಡಬೇಕು..
ಹೀಗೆ ದಾನದ ಕ್ರಮಸಂಖ್ಯೆ ಅಂತೆ ಜಪ ಮಾಡಬೇಕು ..
ಮುಂದುವರಿಯುತ್ತದೆ.

Read More :  ವರಮಹಾಲಕ್ಷ್ಮಿ ಪೂಜೆಯ ಮಹತ್ವ ಹಾಗೂ ಚಾರುಮತಿಯ ಪಾತ್ರ ಎನು ತಿಳಿಯಬೇಕೇ ?

Leave a Reply