ಪೇಜಾವರ ಪರ್ಯಾಯ 2016

ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು, ಪೇಜಾವರ ಮಠ
ಪರ್ಯಾಯ 2016-2018

ಸುಬ್ರಮಣ್ಯ ಸಮೀಪದ ರಾಮಕುಂಜದ ಮಿಯ್ಯಾಳ ನಾರಾಯಣಾಚಾರ್ಯ ಕಮಲಮ್ಮ ದಂಪತಿಗಳ ಸುಪುತ್ರ, ವೆಂಕಟರಮಣ 27-4-1931 ರಂದು ಜನಿಸಿದರು. ರಾಮಕುಂಜದ ಸಂಸ್ಕೃತ ಶಾಲೆಯಲ್ಲಿ ಓದುತ್ತಿರುವಾಗಲೇ (7ನೇ ವರ್ಷದಲ್ಲಿ) ಉಪನಯನವಾಯಿತು. ಹಂಪೆಯ ಯಂತ್ರೋದ್ಧಾರ ಮುಖ್ಯಪ್ರಾಣನ ಸನ್ನಿಧಿಯಲ್ಲಿ ಬಹುಧಾನ್ಯ ಸಂ|ರದ ಮಾರ್ಗಶಿರ ಶುದ್ಧ ಪಂಚಮಿ,ಶುಕ್ರವಾರ, 3-12-1938 ರಂದು ಶ್ರೀವಿಶ್ವಮಾನ್ಯತೀರ್ಥರಿಂದ ಸನ್ಯಾಸ ಸ್ವೀಕರಿಸಿದರು. ವಿಶ್ವೇಶತೀರ್ಥರೆಂದು ಆಶ್ರಮ ನಾಮ. ಪ್ರಾರಂಭಿಕ ಶಿಕ್ಷಣ ಅಡ್ಡೆ ವೇದವ್ಯಾಸಾಚಾರ್ಯರಲ್ಲಿ ನಡೆಸಿ, ಪ್ರೌಢ ಪಾಠಗಳು ಶ್ರೀ ಭಂಡಾರಕೇರಿ(ನಂತರ ಪಲಿಮಾರು ಮಠದ ಪೀಠಾಧೀಶರಾದರು) ಮಠಾಧೀಶರಾದ ಶ್ರೀ ವಿದ್ಯಾಮಾನ್ಯತೀರ್ಥರಲ್ಲಿ ಭಂಡಾರಕೇರಿ ಮಠದಲ್ಲಿ ಎಂಟು ವರ್ಷಗಳ ಕಾಲ ನಡೆಯಿತು. ನಂತರ ಉಡುಪಿಯಲ್ಲಿ ನ್ಯಾಯಸುಧಾ ಮಂಗಳ ವಿಜೃಂಭಣೆಯಿಂದ ಜರುಗಿತು. ನ್ಯಾಯವೇದಾಂತಾದಿ ಶಾಸ್ತ್ರದಲ್ಲಿ ಅಪಾರ ಪಾಂಡಿತ್ಯ, ವಾಕ್ಯಾರ್ಥದಲ್ಲಿ ನಿಪುಣತೆಯನ್ನು ಪಡೆದರು.

ಶ್ರೀಸೋದೆ ವಾದಿರಾಜ ಸ್ವಾಮಿಗಳು ಎರಡು ತಿಂಗಳ ಪರ್ಯಾಯವನ್ನು ಎರಡು ವರ್ಷ ಅವಧಿಗೆ ವಿಸ್ತರಿಸಿದಾಗ, ಮೊದಲ ಪರ್ಯಾಯ ಅಷ್ಟಕ 1522 ರಲ್ಲಿ ಪಲಿಮಾರು ಮಠದಿಂದ ಆರಂಭಗೊಂಡಿತು. ಪೇಜಾವರ ಮಠದ ಪ್ರಥಮ ಪರ್ಯಾಯ 1536 ರಲ್ಲಿ. ನಂತರ 1552, 1568, 1584, 1600, 1616, 1632, 1648, 1664, 1680, 1696, 1712, 1728, 1744, 1760, 1776, 1792, 1808, 1824, 1840, 1856, 1872, 1888, 1904, 1920, 1936, 1952, 1968, 1984, 2000, ರಲ್ಲಿ ನಡೆದಿತ್ತು. ಮುಂದಿನ ದಾಖಲೆ ಪರ್ಯಾಯ 2016 ರಲ್ಲಿ. ಪೇಜಾವರ ಮಠದ ಪರಂಪರೆಯಲ್ಲಿ 33ನೇ ಯವರಾದ, ಶ್ರೀ ಶ್ರೀ ವಿಶ್ವೇಶತೀರ್ಥರು 1952 ರಲ್ಲಿ ತನ್ನ ಪ್ರಪ್ರಥಮ ಪರ್ಯಾಯವನ್ನು 1968, 1984, ಮತ್ತು 2000 ನೇ ಇಸವಿಯಲ್ಲಿ ನಾಲ್ಕನೇ ಪರ್ಯಾಯವನ್ನು ಯಶಸ್ವಿಯಾಗಿ ನೆರವೇರಿಸಿದ್ದರು. 2016 ರ ಪರ್ಯಾಯ ದಾಖಲೆಯ ಐದನೇ ಪರ್ಯಾಯ!

Leave a Reply