ಮಹಾಶಿವರಾತ್ರಿ ದಿನ ಶಿವನ ಪೂಜೆ ಮಾಡುವಾಗ..ನೆನಪಿನಲ್ಲಿ ಇಡಬೇಕಾದ 5 ವಿಷಯಗಳು.

  • 7
    Shares

ಶಿವನು ಲಿಂಗಸ್ವರೂಪದಲ್ಲಿ ಉದ್ಭವಿಸಿದ ಪವಿತ್ರ ದಿನವೇ ಮಹಾಶಿವರಾತ್ರಿ. ಇದೇ ದಿನ ಶಿವಪಾರ್ವತಿಯರ ಕಲ್ಯಾಣ ಸಹ ನಡೆಯಿತು. ಪ್ರತಿ ತಿಂಗಳು ಬರುವ ಮಾಸ ಶಿವರಾತ್ರಿಗಳಿಗಿಂತ ವರ್ಷಕ್ಕೊಮ್ಮೆ ಬರುವ ಮಹಾಶಿವರಾತ್ರಿ ತುಂಬಾ ಶ್ರೇಷ್ಠವಾದ, ಶಕ್ತಿಯುತವಾದದ್ದು ಎನ್ನುತ್ತಾರೆ. ಇದೇ ದಿನ ಶಿವನಿಗೆ ಅಭಿಷೇಕ ಮಾಡಿದರು, ಅರ್ಚನೆ ಮಾಡಿದರೂ ತುಂಬಾ ಪುಣ್ಯ ಸಿಗುತ್ತದೆ. ಅದೇ ರೀತಿ ದಿನವೆಲ್ಲಾ ಉಪವಾಸ ಇದ್ದು ರಾತ್ರಿ ಹೊತ್ತು ಶಿವನ ಭಜನೆ ಜಾಗರಣೆ ಮಾಡಿದರೆ ಅದೆಷ್ಟೊ ಜನ್ಮಗಳ ಪುಣ್ಯ ಫಲ ಸಿಗುತ್ತದೆ ಎಂದು ನಂಬಲಾಗಿದೆ. ಅದೆಲ್ಲಾ ಸರಿ ಮಹಾಶಿವರಾತ್ರಿ ದಿನ ಶಿವಾಲಯಕ್ಕೆ ಹೋದಾಗ ಶಿವನ ದರ್ಶನ ಯಾವ ರೀತಿ ಪಡೆದುಕೊಳ್ಳಬೇಕು, ಯಾವ ಪೂಜೆಗಳನ್ನು ಮಾಡಬೇಕು ಎಂಬುದನ್ನು ತಿಳಿಯೋಣ .ಶಿವಾಲಯಕ್ಕೆ ಹೋದ ಕೂಡಲೆ ಶಿವನಿಗಿಂತ ಮುಂಚಿತವಾಗಿ ನಂದೀಶ್ವರನನ್ನು ಪ್ರಾರ್ಥಿಸಬೇಕು. ನಂದಿಗೆ ಪೂಜೆ ಮಾಡಿದ ಬಳಿಕ ತುಪ್ಪ ಅಥವಾ ಎಳ್ಳೆಣ್ಣೆಯಲ್ಲಿ ದೀಪ ಬೆಳಗಬೇಕು. ಆ ಬಳಿಕ ಮನಸಾರೆ ಪ್ರಾರ್ಥಿಸಬೇಕು. ಆ ರೀತಿ ಮಾಡುವುದರಿಂದ ಭಕ್ತರು ಕೋರಿದ್ದು ಈಡೇರುತ್ತದೆ. ನಂದಿ ವಿಜ್ಞಾನಕ್ಕೆ ಸಂಕೇತ ಎಂದು, ವಿದ್ಯಾರ್ಥಿಗಳು ಆತನನ್ನು ಪೂಜಿಸಿದರೆ ವಿದ್ವಾಂಸರಾಗುತ್ತಾರೆಂದು ಪುರಾಣಗಳಲ್ಲಿ ಹೇಳಲಾಗಿದೆ. ಆದರೆ ನಂದೀಶ್ವರನಿಗೆ ದೀಪ ಬೆಳಗಿದ ಬಳಿಕ ಭಕ್ತರು ತಮ್ಮ ಕೋರಿಕೆಯನ್ನು ಆತನ ಕಿವಿಯಲ್ಲಿ ಹೇಳಬೇಕು. ಅದನ್ನು ಇತರರ ಜತೆಗೆ ಹಂಚಿಕೊಳ್ಳಬಾರದು. ಹಾಗೆ ಮಾಡಿದರೆ ಅದು ನೆರವೇರುತ್ತದೆ ಎಂಬ ನಂಬಿಕೆ.

ಮಹಾಶಿವರಾತ್ರಿ ಶಿವನ ಪೂಜೆ

ರುದ್ರಾಭಿಷೇಕ:

ನಂದೀಶ್ವರನಿಗೆ ಪೂಜೆ ಮಾಡಿದ ಬಳಿಕ ಶಿವಾಲಯಕ್ಕೆ ಹೋಗಿ ನಂದಿ ಕೊಂಬಿನ ಮೂಲಕ ಶಿವಲಿಂಗ ದರ್ಶನ ಮಾಡಿ,ಆ ಬಳಿಕ ಶಿವಲಿಂಗಕ್ಕೆ ರುದ್ರಾಭಿಷೇಕ ಮಾಡಿದರೆ ಒಳ್ಳೆಯದಾಗುತ್ತದೆ. ಇದರಿಂದ ಮನಸ್ಸಿನಲ್ಲಿರುವ ಮಲಿನಗಳು ದೂರಾಗುತ್ತವೆ.

ಪಂಚಾಕ್ಷರಿ ಮಂತ್ರ:

ಶಿವ ಪೂಜೆ ಮಾಡುವಾಗ ಪಂಚಾಕ್ಷರಿ ಮಂತ್ರ ಪಠಿಸಬೇಕು. ಓಂ ನಮಃ ಶಿವಾಯ ಎಂದು ಶಿವನನ್ನು ಪ್ರಾರ್ಥಿಸಬೇಕು. ಇದರಿಂದ ಶಿವನ ಕೃಪೆಗೆ ಪಾತ್ರರಾಗುತ್ತೇವೆ.

ಮಹಾಮೃತ್ಯುಂಜಯ ಮಂತ್ರ:

ಮೃತ್ಯುವಿನ ಭಯ ನಿವಾರಣೆಯಾಗಬೇಕಾದರೆ, ಮೋಕ್ಷ ಪ್ರಾಪ್ತಿಗೆ ಈ ಮಂತ್ರವನ್ನು ಮಹಾಶಿವರಾತ್ರಿ ದಿನ ಜಪಿಸಬೇಕು. ಇದನ್ನೇ ತ್ರಯಂಬಕ ಮಂತ್ರ, ರುದ್ರ ಮಂತ್ರ, ಮೃತ ಸಂಜೀವಿನಿ ಮಂತ್ರ ಎಂದೂ ಕರೆಯುತ್ತಾರೆ. ಓಂ ತ್ರ್ಯಂಬಕಂ ಯಜಾಮಹೆ ಸುಗಂಧಿ ಪುಷ್ಟಿ ವರ್ಧನಂ ಊರ್ವಾರುಕಮಿವ ಬಂಧನಾತ್ ಮೃತ್ಯೋರ್ಮುಕ್ಷಿಯ ಮಾಮೃತಾತ್.

Read More :  ಮಹಾ ಶಿವರಾತ್ರಿ ಹಬ್ಬದ ಮಹತ್ವ, ಐತಿಹಾಸಿಕ ಹಿನ್ನೆಲೆ

ಶಿವಸಹಸ್ರ ನಾಮ ಸ್ತೋತ್ರ:

ಶಿವನಿಗೆ ಇರುವ ಹೆಸರುಗಳನ್ನು ಅನುಸರಿಸಿ ಸಾಗುವ ಸ್ತೋತ್ರ ಇದು. ಇದನ್ನು ಶಿವರಾತ್ರಿ ದಿನ ಪಠಿಸಿದರೆ ಎಷ್ಟೋ ಸಾವಿರ ಜನ್ಮಗಳ ಪುಣ್ಯ ಲಭಿಸುತ್ತದೆ.

  • 7
    Shares

Leave a Reply