ಸಹಸ್ರಲಿಂಗ ಸೊಬಗಿನ ಸಿರಿ

  • 4
    Shares

ತನ್ನ ಪಾಡಿಗೆ ತಾನು ಹರಿಯುವ, ಉಕ್ಕುವ ನದಿಗೆ ಯಾರನ್ನೋ ಸೇರುವ ಧಾವಂತವಿಲ್ಲ. ಇನ್ಯಾರನ್ನೋ ಗೆಲ್ಲುವ ಗಡಿಬಿಡಿಯೂ ಇಲ್ಲ. ಆದರೆ ಶಾಂತವಾಗಿ, ನಿರ್ಮಲವಾಗಿ ಒಂದು ಕ್ಷಣ ನಿಮ್ಮನ್ನು ಬೆರಗು ಮೂಡಿಸುತ್ತದೆಯಲ್ಲ, ಅಲ್ಲಿಗೆ ನದಿಗೂ ಸಾರ್ಥಕ ಭಾವ.

ಧಾರವಾಡದಲ್ಲಿ ಹುಟ್ಟಿ ಕಾಡಿನ ನಡುವೆ ಹರಿಯುವ ಶಾಲ್ಮಲಾ ನದಿ ತನ್ನ ಹರಿವಿನ ಉದ್ದಕ್ಕೂ ಹಲವಾರು ವೈಶಿಷ್ಟ್ಯಗಳಿಂದ ಸೆಳೆಯುತ್ತದೆ. ಹೀಗೆ ಹರಿಯುತ್ತಾ …ಹರಿಯುತ್ತಾ …ಶಿರಸಿಯ ಹುಳಗೋಳದ ಸಮೀಪ ನದಿ ‘ಸಹಸ್ರಲಿಂಗ’ದ ಹೆಸರಿನಲ್ಲಿ ಗಮನ ಸೆಳೆಯುತ್ತದೆ. ಕಲ್ಲುಬಂಡೆಗಳ ನಡುವೆ ಶಾಂತವಾಗಿ ಹರಿಯುವ ಶಾಲ್ಮಲಾ ನದಿಯ ಒಡಲಲ್ಲಿ ಸಾವಿರಾರು ಈಶ್ವರಲಿಂಗಗಳು ನಿಮ್ಮನ್ನು ಅಚ್ಚರಿ ಮೂಡಿಸಿ ಒಂದಿಷ್ಟು ಪ್ರಶ್ನೆಗಳನ್ನು ಎಬ್ಬಿಸುತ್ತವೆ. ನದಿಯ ಮೇಲೆ ಚಿತ್ರ ಬರೆಯಲಿಕ್ಕಾಗಲ್ಲ ಅನ್ನೋದೆ ಸತ್ಯ. ಆದರೂ ಶಾಲ್ಮಲಾ ನದಿಯ ಮೇಲೆ ಅದ್ಭುತ ಕೆತ್ತನೆಗಳಿವೆ ಅಂದರೆ ನಂಬಲೇಬೇಕು. ಇಲ್ಲಿನ ಬಂಡೆಗಳ ಮೇಲೆ ಸಾವಿರಾರು ಲಿಂಗ ಹಾಗೂ ನಂದಿ ವಿಗ್ರಹಗಳನ್ನು ಕೆತ್ತಲಾಗಿದೆ. ಹೀಗಾಗಿ ಇದಕ್ಕೆ ಸಹಸ್ರಲಿಂಗ ಅನ್ನುವ ಹೆಸರು.

ಉತ್ತರಕನ್ನಡದ ಶಿರಸಿಯಿಂದ ಸುಮಾರು 13 ಕಿಲೋಮೀಟರ್ ದೂರದಲ್ಲಿರುವ ಸಹಸ್ರಲಿಂಗ ಪ್ರವಾಸಿಗರ ಮೆಚ್ಚಿನ ತಾಣ.
ಶಿರಸಿಯಿಂದ ಯಲ್ಲಾಪುರ ಮಾರ್ಗವಾಗಿ ಸಹಸ್ರಲಿಂಗ ತಲುಪಬಹುದು. ದಾರಿಯುದ್ದಕ್ಕೂ ಪಕ್ಷಿಗಳ ಕಲರವ, ಮತ್ತೆಮತ್ತೇ ಸವಿಯಬೇಕೆನ್ನುವ ಕಾಡ ಹಣ್ಣುಗಳು, ಸುವಾಸಿತ ಕುಸುಮಗಳು ಸುಮ್ಮನೆ ಸೆಳೆಯುತ್ತವೆ. ಪ್ರಕೃತಿಯ ನಡುವಿನ ಇನ್ನೂ ಏನೇನೋ ಅದ್ಭುತಗಳನ್ನು ನೋಡಲಿಕ್ಕೆ ಅಂತಾನೇ ಕುತೂಹಲದ ಹೆಜ್ಜೆ ಇಡುವ ನಿಮಗೆ ಮುಂದೇನಿರಬಹುದು ಅನ್ನುವ ಬಯಕೆ ನಿಮ್ಮ ಬೆವರನ್ನು ಆರಿಸುತ್ತದೆ. ಹಸಿವನ್ನು ತಣಿಸುತ್ತದೆ. ಯಾವುದೋ ಉತ್ಸಾಹ, ಇನ್ಯಾವುದೋ ಆತುರ ನಿಮ್ಮನ್ನು ಸಹಸ್ರಲಿಂಗದವರೆಗೆ ತಂದು ನಿಲ್ಲಿಸುತ್ತದೆ.ಇಂಥದ್ದೊಂದು ಸುಂದರ ತಾಣದ ರಕ್ಷಣೆಗೆ ಸ್ಥಳೀಯರು ಟೊಂಕಕಟ್ಟಿ ನಿಂತಿದ್ದಾರೆ. ಸಹಸ್ರಲಿಂಗದಿಂದ ಗಣೇಶಪಾಲಿನವರೆಗಿನ ಶಾಲ್ಮಲಾ ನದೀಗುಂಟ 15 ಕಿ.ಮೀ ದೂರದ ವರೆಗೆ ಸಂರಕ್ಷಿತ ಪ್ರದೇಶ ಎಂದು ಗುರುತಿಸಿ ಘೋಷಿಸಲಾಗಿದೆ.

ಸಹಸ್ರಲಿಂಗ ಸೋಂದಾ ಸಹಸ್ರಲಿಂಗ ಸೋಂದಾ ಸಹಸ್ರಲಿಂಗ ಸೋಂದಾ ಸಹಸ್ರಲಿಂಗ ಸೋಂದಾ ಸಹಸ್ರಲಿಂಗ ಸೋಂದಾ ಸಹಸ್ರಲಿಂಗ ಸೋಂದಾ ಸಹಸ್ರಲಿಂಗ ಸೋಂದಾ ಸಹಸ್ರಲಿಂಗ ಸೋಂದಾ ಸಹಸ್ರಲಿಂಗ ಸೋಂದಾ ಸಹಸ್ರಲಿಂಗ ಸೋಂದಾ ಸಹಸ್ರಲಿಂಗ ಸೋಂದಾ ಸಹಸ್ರಲಿಂಗ ಸೋಂದಾ

ಸೂಕ್ತ ಸಮಯ

ಸಹಸ್ರಲಿಂಗಕ್ಕೆ ಮಳೆಗಾಲದಲ್ಲಿ ಹೋಗುವುದು ಕಷ್ಟ. ನೀರಿನ ಹರಿವು ಅಪಾರ. ಲಿಂಗಗಳು ಕೂಡ ನೀರಿನಿಂದ ಮುಚ್ಚಿ ಹೋಗುವುದರಿಂದ ಲಿಂಗಗಳ ದರ್ಶನ ಕಷ್ಟ. ಬೇಸಿಗೆ ಅಂದರೆ ನೀರಿನ ಹರಿವು ಕೂಡ ಕಡಿಮೆಯಾಗಿರುತ್ತದೆ. ಆದರೆ ಲಿಂಗಗಳ ದರ್ಶನಕ್ಕೆ ಕೊರತೆ ಇಲ್ಲ. ಚಳಿಗಾಲವನ್ನು ಆಯ್ಕೆ ಮಾಡಿಕೊಂಡರೆ ಸಹಸ್ರಲಿಂಗಗಳ ದರ್ಶನದ ಜತೆ ಶಾಲ್ಮಲಾ ಸೊಬಗುನ್ನು ಸವಿಯಬಹುದು.
ಒಟ್ನಲ್ಲಿ ಶಿರಸಿಗೆ ಪ್ರವಾಸಕ್ಕೆ ಹೊರಟಿದ್ದರೆ ಸಹಸ್ರಲಿಂಗ ನೋಡುವುದನ್ನು ಮಾತ್ರ ಮಿಸ್ ಮಾಡಿಕೊಳ್ಳಬೇಡಿ. ಸಮೀಪದ ಸೋಂದಾ ಮತ್ತು ಸ್ವರ್ಣವಲ್ಲಿ ಮಠಕ್ಕೂ ಭೇಟಿ ನೀಡಬಹುದು. ಇದೇ ನದಿಗೆ ಗಣೇಶ ಪಾಲ್ ಸಮೀಪ ಶಿವಗಂಗಾ ಜಲಪಾತವಿದೆ. ಇದಂತೂ ಚಾರಣ ಪ್ರಿಯರನ್ನು ಸೆಳೆಯುತ್ತದೆ.

ಮಾರ್ಗ

ಶಿರಸಿಯಿಂದ ಯಲ್ಲಾಪುರ ಮಾರ್ಗವಾಗಿ ಹುಳಗೋಳದಿಂದ ತಿರುವು ತೆಗೆದುಕೊಂಡರೆ ಒಂದುವರೆ ಕಿಲೋಮೀಟರ್ ದೂರದಲ್ಲಿ ಸಹಸ್ರಲಿಂಗ ದರ್ಶನವಾಗುತ್ತದೆ. ಶಿರಸಿಯಿಂದ ಯಲ್ಲಾಪುರ ಕಡೆ ಸಂಚರಿಸುವ ಬಸ್‌ಗಳ ಮೂಲಕ ತಲುಪಬಹುದು. ಹುಬ್ಬಳ್ಳಿಯಿಂದ ಯಲ್ಲಾಪುರ ಮೂಲಕವೂ ಸಹಸ್ರಲಿಂಗ ತಲುಪಬಹುದು.

ಆಹಾರ

ಅಗತ್ಯವಿದ್ದರೆ ನೀವು ಊಟ, ತಿಂಡಿಗಳನ್ನು ತೆಗೆದುಕೊಂಡು ಹೋಗಬಹುದು. ಸಹಸ್ರಲಿಂಗದಲ್ಲೇ ಪುಟ್ಟ ಹೋಟೆಲ್ ಇದ್ದು, ಊಟದ ವ್ಯವಸ್ಥೆ ಇದೆ.

ವಸತಿ

ವಸತಿಗೆ ಸೋಂದಾ ಪ್ರವಾಸಿ ಮಂದಿರ ಅಥವಾ ಶಿರಸಿ ಆಶ್ರಯಿಸಬಹುದು.

ಮಾಹಿತಿ : ವಿಜಯ ಕರ್ನಾಟಕ.

  • 4
    Shares

Leave a Reply