ಶ್ರೀವಿಷ್ಣುಸಹಸ್ರನಾಮ ಸ್ತೋತ್ರ ಪಾರಾಯಣ ಹೇಗೆ ಮಾಡಬೇಕು? ಇಲ್ಲಿದೆ ನೋಡಿ.

  • 8
    Shares

ಶ್ರೀವಿಷ್ಣುಸಹಸ್ರನಾಮ ಸ್ತೋತ್ರ ಪಾರಾಯಣ ಹೇಗೆ ಮಾಡಬೇಕು ಎಂದು ತಿಳಿದುಕೊಳ್ಳಬೇಕಾದರೆ, ಮೊದಲು ಈ ಮೂರನ್ನು ತಿಳಿದುಕೊಳ್ಳುವುದು ಬಹುಮುಖ್ಯವಾದುದು.

ಶ್ರೀವಿಷ್ಣುಸಹಸ್ರನಾಮ ಸ್ತೋತ್ರ ಪಾರಾಯಣ

1. “ಶ್ರೀವಿಷ್ಣುಸಹಸ್ರನಾಮ” ಎಂದರೆ ಏನು?

2. “ಸ್ತೋತ್ರ” ಎಂದರೆ ಏನು?

3. “ಪಾರಾಯಣ” ಎಂದರೆ ಏನು?

ಶ್ರೀವಿಷ್ಣುಸಹಸ್ರನಾಮ

ಇದರಲ್ಲಿ ಮೂರು ಶಬ್ದಗಳಿವೆ:-

ಶ್ರೀವಿಷ್ಣುಸಹಸ್ರನಾಮ.

ಶ್ರೀವಿಷ್ಣು = ಭಗವಂತ.

ಸಹಸ್ರ = ಸಾವಿರ ಅಥವಾ ಸಾವಿರಾರು.

ನಾಮ/ನಾಮನ್ = ಹೆಸರು, ಒಂದು ವಸ್ತುವನ್ನು ತಿಳಿಸುವ ಶಬ್ದ, ಒಬ್ಬ ವ್ಯಕ್ತಿಯನ್ನು ಕರೆಯುವ ಸಂಜ್ಞಾ ಶಬ್ದ.

ಇದರಿಂದ ತಿಳಿಯುವುದೇನೆಂದರೆ “ಶ್ರೀವಿಷ್ಣುಸಹಸ್ರನಾಮ” ಎಂದರೆ ಭಗವಂತನ ಸಾವಿರ/ಸಾವಿರಾರು ಹೆಸರುಗಳು.
ಆದರೆ ಭಗವಂತ ಒಂದು ವಸ್ತುವೂ ಅಲ್ಲ, ಒಬ್ಬ ವ್ಯಕ್ತಿಯೂ ಅಲ್ಲ. ಭಗವಂತ ಜ್ಞಾನಸ್ವರೂಪ. ಹಾಗಾದರೆ ಭಗವಂತನ ಸಾವಿರ ನಾಮಗಳು ಎಂದರೆ ಏನು ಎನ್ನುವ ಪ್ರಶ್ನೆ ಬರುತ್ತದೆ. ಭಗವಂತನ ಸಾವಿರ ನಾಮಗಳು ಎಂದರೆ  “ಭಗವಂತನ ಸಾವಿರ ಗುಣವಾಚಕ ಸಂಜ್ಞೆಗಳು” ಎನ್ನುವುದಾಗಿರುತ್ತದೆ.

ಶ್ತೋತ್ರ = ಶ್ಲಾಘನೆ, ಸ್ತುತಿ, ಪ್ರಶಂಸೆ, ಹೊಗಳುವುದು.

ಪಾರಾಯಣ = ಆದಿಯಿಂದ ಕೊನೆಯವರೆಗೆ ಗ್ರಂಥವನ್ನು ಓದುವುದು.

ಆದುದರಿಂದ ಶ್ರೀವಿಷ್ಣುಸಹಸ್ರನಾಮ ಸ್ತೋತ್ರ ಪಾರಾಯಣ ಎಂದರೆ “ಭಗವಂತನ ಸಾವಿರ ಗುಣವಾಚಕ ಸಂಜ್ಞೆಗಳನ್ನು ಮನನ ಮಾಡಿ ಭಗವಂತನನ್ನು ಪ್ರಶಂಸಿಸುವುದು” ಎಂದು ಹೇಳಬಹುದಾಗಿದೆ. ಶ್ರೀವಿಷ್ಣುಸಹಸ್ರನಾಮ ಸ್ತೋತ್ರ ಪಾರಾಯಣ ಮಾಡುವಾಗ ತ್ರಿಕರಣಪೂರ್ವಕವಾಗಿ ಮಾಡಬೇಕಾಗಿರುತ್ತದೆ. ತ್ರಿಕರಣಪೂರ್ವಕ ಎಂದರೆ ಕಾಯೇನವಾಚಾಮನಸಾ ಅಂದರೆ ವಾಣಿಯಿಂದ ವರ್ಣಿಸಿ; ಮನಸ್ಸಿನಿಂದ ಸ್ಮರಿಸಿ; ಭಗವಂತನ ಚರಣಗಳಿಗೆ ಶರಣಾಗತನಾಗಿ (ಮಾತು, ಮನಸ್ಸು ಮತ್ತು ಕೃತಿ) ಮಾಡುವ ಉಪಾಸನೆ. ಈ ರೀತಿಯಾಗಿ ಶ್ರೀವಿಷ್ಣುಸಹಸ್ರನಾಮ ಸ್ತೋತ್ರದ ಪಾರಾಯಣ ಮಾಡಿದರೆ ಇಚ್ಛಿತ ಫಲ ಸಿದ್ಧಿಯಾಗುತ್ತದೆ.

||ಶ್ರೀಕೃಷ್ಣಾರ್ಪಣಮಸ್ತು||

||ನಾಹಂ ಕರ್ತಾ ಹರಿ: ಕರ್ತಾ:||

ಕೃಪೆ: ವಿಜಯೇಂದ್ರ ರಾಮನಾಥ ಭಟ್, ಶಿವಮೊಗ್ಗ

  • 8
    Shares
Read More :  ಶ್ರೀ ಗೋಪೀಗೀತಮ್

Leave a Reply